ಕರ್ನಾಟಕದ ಅಭಿವೃದ್ಧಿ ರಿಪೋರ್ಟ್: ಉತ್ತರ ಕರ್ನಾಟಕಕ್ಕೆ ಆದ ಮಹಾಮೋಸ ಎಷ್ಟು? | Govinda Rao Report Analysis


 
ಕಳೆದ 24 ವರ್ಷಗಳಲ್ಲಿ ಕರ್ನಾಟಕದ ಹಿಂದುಳಿದ ತಾಲೂಕುಗಳ ಸಂಖ್ಯೆ 114 ರಿಂದ 177ಕ್ಕೆ ಏರಿಕೆಯಾಗಿದೆ. ಅಂದರೆ, ರಾಜ್ಯದ ಶೇಕಡಾ 75 ರಷ್ಟು ತಾಲೂಕುಗಳು ಈಗ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ ಎಂದು ಗೋವಿಂದರಾವ್ ವರದಿ ತಿಳಿಸಿದೆ

ಅತ್ಯಂತ ಹಿಂದುಳಿದ 59 ತಾಲೂಕುಗಳು ಕೇವಲ ಕಲಬುರ್ಗಿ (39) ಮತ್ತು ಬೆಳಗಾವಿ (20) ವಿಭಾಗಗಳಲ್ಲಿವೆ. ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಇಂತಹ ಒಂದೂ ತಾಲೂಕು ಇಲ್ಲದಿರುವುದು ಭೀಕರ ಪ್ರಾದೇಶಿಕ ಅಸಮಾನತೆಗೆ ಸಾಕ್ಷಿಯಾಗಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಳೆದ 20 ವರ್ಷಗಳಲ್ಲಿ ವ್ಯಯಿಸಿದ ₹32,000 ಕೋಟಿ ಹಣ, ತಾಲೂಕುಗಳ ಬದಲಿಗೆ ಜಿಲ್ಲಾ ಕೇಂದ್ರಗಳ ಸಿವಿಲ್ ಕೆಲಸಗಳು ಮತ್ತು ಕಮಿಷನ್ ದಂಧೆಗೆ ಬಳಕೆಯಾಗಿರುವುದು ವರದಿಯಲ್ಲಿ ಬಯಲಾಗಿದೆ

Top Post Ad

Below Post Ad