ಸಂಸತ್ತಿನಲ್ಲಿ ಮೋದಿಗೆ ಹಲ್ಲೆ ಯತ್ನ? ಶಾಕಿಂಗ್ ವಿಡಿಯೋ ರಿಲೀಸ್!
ಹಲ್ಲೆ ಸಂಚಿನ ಆರೋಪ: ಫೆಬ್ರವರಿ 4 ರಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮೇಲೆ ದೈಹಿಕ ಹಲ್ಲೆ ನಡೆಸಲು ಕಾಂಗ್ರೆಸ್ ಸಂಸದರು ಸಂಚು ರೂಪಿಸಿದ್ದರು ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕಿರೆನ್ ರಿಜಿಜು ವೀಡಿಯೋ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ.
ವೀಡಿಯೋ ವಿವರ: ವಿಪಕ್ಷಗಳ ಮಹಿಳಾ ಸಂಸದರು ಬ್ಯಾನರ್ ಹಿಡಿದು ಪ್ರಧಾನಿಯವರ ಆಸನದತ್ತ ನುಗ್ಗಲು ಯತ್ನಿಸುತ್ತಿರುವುದು ಮತ್ತು ಬಿಜೆಪಿ ಸಂಸದರು ಅವರನ್ನು ತಡೆಯುತ್ತಿರುವ ದೃಶ್ಯಗಳು ವೀಡಿಯೋದಲ್ಲಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಪ್ರಧಾನಿ ಭಾಷಣ ರದ್ದುಗೊಳಿಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.
ವಿಪಕ್ಷಗಳ ಪ್ರತಿಕ್ರಿಯೆ: ಈ ಆರೋಪಗಳನ್ನು ನಿರಾಕರಿಸಿರುವ ಕಾಂಗ್ರೆಸ್, ಪ್ರಧಾನಿಯವರು ಸದನವನ್ನು ಎದುರಿಸಲು ಹೆದರುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದು, ಸ್ಪೀಕರ್ ಮೇಲೆ ಒತ್ತಡ ಹೇರಿ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

