ಕೈಲಾಸ ಮಾನಸ ಸರೋವರದ ಬಗ್ಗೆ ನೀವು ಕೇಳೇ ಇರ್ತಿರಿ.. ಇದು ಹಿಂದೂಗಳ ಪವಿತ್ರ ಆರಾಧನ ಸ್ಥಳ. ಇಂತಹ ಹಿಂದೂಗಳ ಪವಿತ್ರ ಸ್ಥಳ ಕೈಲಾಸ ಮಾನಸ ಸರೋವರ ಚೀನಾಗೆ ಸೇರಿದ್ದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ. ಇದರ ಬಗ್ಗೆ ಒಂದು ಚಿಕ್ಕ ಮಾಹಿತಿ ಇದೆ ಅದೇನು ಹೇಳುತ್ತೇನೆ ಬನ್ನಿ
ಕೈಲಾಸ ಪರ್ವತ ಮತ್ತು ಮಾನಸ ಸರೋವರವು ಟಿಬೆಟ್ ನಲ್ಲಿವೆ. ಐತಿಹಾಸಿಕವಾಗಿ, ಟಿಬೆಟ್ ಸ್ವತಂತ್ರ ರಾಜ್ಯವಾಗಿತ್ತು. ಆದರೆ, 1950ರಲ್ಲಿ ಚೀನಾ ಟಿಬೆಟ್ ಮೇಲೆ ಆಕ್ರಮಣ ಮಾಡಿ, ಅದನ್ನು ತನ್ನ ಸ್ವಾಯತ್ತ ಪ್ರದೇಶವನ್ನಾಗಿ ಮಾಡಿಕೊಂಡಿತು. ಇದರಿಂದಾಗಿ, ಟಿಬೆಟ್\u200cನಲ್ಲಿರುವ ಎಲ್ಲಾ ಪ್ರದೇಶಗಳು, ಕೈಲಾಸ ಮಾನಸ ಸರೋವರ ಸೇರಿದಂತೆ, ಚೀನಾದ ಆಡಳಿತಕ್ಕೆ ಒಳಪಟ್ಟವು.

