ಅಳಿದು ಹೋದ ಸರಸ್ವತಿ ನದಿಯ ಬಗ್ಗೆ ನೀವು ಕೇಳಿರ್ತಿರಿ.. ಅದರ ಬಗ್ಗೆ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ.. ಒಂದಿಷ್ಟು ಜನ ಅದು ಕಾಲ್ಪನಿಕ ಮಾತ್ರ..ಅದು ಕಟ್ಟುಕಥೆ ಅಂತಾರೆ.ಆದರೆ, ಈಗ ಸರಸ್ವತಿ ನದಿ ಇತ್ತು ಎನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಂತೆ ಕಾಣುತ್ತಿದೆ.ನಮ್ಮ ಇತಿಹಾಸದ ಪುಟಗಳನ್ನೇ ಬದಲಾಯಿಸಬಹುದಾದ ಒಂದು ಅದ್ಭುತ ಸತ್ಯ ಇದೀಗ ರಾಜಸ್ಥಾನದ ಮಣ್ಣಿನಲ್ಲಿ ಪತ್ತೆಯಾಗಿದೆ. ಹಾಗಾದರೆ, ರಾಜಸ್ಥಾನದಲ್ಲಿ ಏನೆಲ್ಲಾ ಪತ್ತೆಯಾಗಿದೆ? ಸರಸ್ವತಿ ನದಿಗೂ ಅಲ್ಲಿಗೂ ಹೇಗೆ ಲಿಂಕ್ ಮಾಡಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ..
2024 ಮತ್ತು 2025 ರ ನಡುವೆ ರಾಜಸ್ಥಾನದ ದೀಗ್ ಜಿಲ್ಲೆಯ ಬಹಾಜ್ ಗ್ರಾಮದಲ್ಲಿ 23 ಮೀಟರ್ ಆಳದ ಪ್ರಾಚೀನ ನದೀ ಕಾಲುವೆಯನ್ನು ಕಂಡುಹಿಡಿಯಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸಿದ ಉತ್ಖನನದಲ್ಲಿ 4,500 ವರ್ಷಗಳಷ್ಟು ಹಳೆಯ ನಾಗರಿಕತೆಯ ಅವಶೇಷಗಳು ಮತ್ತು ಸರಸ್ವತಿ ನದಿಗೆ ಸಂಬಂಧಿಸಿದ ಒಂದು ಪ್ರಾಚೀನ ನದೀ ಕಾಲುವೆ ಕಂಡುಬಂದಿದೆ. ಇಲ್ಲಿ ಬ್ರಾಹ್ಮಿ ಲಿಪಿಯ ಮುದ್ರೆಗಳು, ತಾಮ್ರದ ನಾಣ್ಯಗಳು, ಮೌರ್ಯರ ಕಾಲದ ಶಿಲ್ಪಗಳು, ಯಜ್ಞಕುಂಡಗಳು ಮತ್ತು ಶಿವ-ಪಾರ್ವತಿ ವಿಗ್ರಹಗಳು ಸಹ ದೊರಕಿವೆ.
ಒಟ್ಟಾರೆ, ಪುರಾತತ್ವ ಮತ್ತು ಭೂವೈಜ್ಞಾನಿಕ ಪುರಾವೆಗಳು ಸರಸ್ವತಿ ನದಿ ಒಂದು ಕಾಲದಲ್ಲಿ ಭಾರತ ಉಪಖಂಡದ ವಾಯುವ್ಯ ಭಾಗದಲ್ಲಿ ಹರಿಯುತ್ತಿದ್ದ ಪ್ರಮುಖ ನದಿಯಾಗಿತ್ತು ಎಂಬುದನ್ನು ಬೆಂಬಲಿಸುತ್ತ
ವೆ.

