ಜಾಖೂ ಬೆಟ್ಟದ 108 ಅಡಿ ಎತ್ತರದ ಬೃಹತ್ ಹನುಮಾನ್ ಪ್ರತಿಮೆ ,ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದು!


 

ಈಗ ನೀವು ನೋಡುತ್ತಿರುವ ಹನುಮಾನ್ ಪ್ರತಿಮೆ ವಿಶ್ವದ ಅತಿ ಎತ್ತರದ ಹನುಮಾನ್ ಪ್ರತಿಮೆಗಳಲ್ಲಿ ಒಂದಾಗಿದೆ.ಇದು ಶಿಮ್ಲಾದ ಅತ್ಯುನ್ನತ ಶಿಖರವಾದ ಜಾಖೂ ಬೆಟ್ಟದ ಮೇಲೆ ಇದೆ. ಇದು 108 ಅಡಿ ಎತ್ತರದ ಬೃಹತ್ ಹನುಮಾನ್ ಪ್ರತಿಮೆ. ಈ ಪ್ರತಿಮೆ ಶಿಮ್ಲಾದ ಅನೇಕ ಭಾಗಗಳಿಂದ ಗೋಚರಿಸುತ್ತದೆ.ಪುರಾಣಗಳ ಪ್ರಕಾರ, ಲಕ್ಷ್ಮಣನಿಗೆ ಶಕ್ತಿಯುತ ಬಾಣದಿಂದ ಗಾಯವಾದಾಗ, ಹನುಮಂತನು ಸಂಜೀವಿನಿ ಬೂಟಿಯನ್ನು ತರಲು ಹಿಮಾಲಯಕ್ಕೆ ಹೋಗುತ್ತಿದ್ದಾಗ, ಜಾಖೂ ಬೆಟ್ಟದ ಮೇಲೆ ವಿಶ್ರಾಂತಿ ಪಡೆದಿದ್ದರು ಎಂದು ಹೇಳಲಾಗುತ್ತದೆ.

Top Post Ad

Below Post Ad