ವಿಧಾನಸೌಧದಂತಹ ಅತೀ ಭದ್ರತೆಯ ವಲಯದಲ್ಲಿ ಕಟ್ಟುನಿಟ್ಟಿನ ತಪಾಸಣೆಗಳನ್ನು ಮೀರಿ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ನಗದು ಸಚಿವರ ಕಚೇರಿ ತಲುಪಿದ್ದು ಹೇಗೆ? ಎಕ್ಸ್-ರೇ ಸ್ಕ್ಯಾನರ್ ಹಾಗೂ ಮೆಟಲ್ ಡಿಟೆಕ್ಟರ್‌ಗಳ ಕಣ್ಣು ತಪ್ಪಿಸಿ ಈ ಬ್ಯಾಗ್ ಒಳಬಂದಿದ್ದು ವ್ಯವಸ್ಥೆಯ ದೊಡ್ಡ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗ ಸಮಗ್ರ ಸಿಸಿಟಿವಿ ತನಿಖೆಗೆ ಆದೇಶಿಸಿದೆ. ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯವಿದೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಗುಪ್ತ ವ್ಯವಹಾರವಿದೆಯೇ?
ವಿಧಾನಸೌಧದಲ್ಲಿ ಭಾರಿ ಭದ್ರತಾ ಲೋಪ! ಸಚಿವರ ಕಚೇರಿ ಸೇರಿದ ಚಿನ್ನ-ಹಣದ ರಹಸ್ಯವೇನು?
February 13, 2026

