ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಮಾಲೆಕಲ್ಲು ಗೋವಿಂದಸ್ವಾಮಿ ದೇವಸ್ಥಾನವನ್ನು ಕರ್ನಾಟಕದ ತಿರುಪತಿ ಎಂದು ಕರೆಯುತ್ತಾರೆ .ದೇವಸ್ಥಾನವು ಬೆಟ್ಟದ ಮೇಲೆ ಇದೆ ಮತ್ತು ಇಲ್ಲಿಗೆ ತಲುಪಲು ಸುಮಾರು 1300 ಮೆಟ್ಟಿಲುಗಳನ್ನು ಏರಬೇಕು.ತಿರುಪತಿಯಲ್ಲಿರುವಂತೆ ಇಲ್ಲಿ ನಿಂತ ಭಂಗಿಯಲ್ಲಿರುವ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ನೋಡಬಹುದು. ಅದಕ್ಕಾಗಿಯೇ ಇದನ್ನು 'ಚಿಕ್ಕ ತಿರುಪತಿ' ಎಂದು ಕರೆಯಲಾಗುತ್ತದೆ.
ಈ ದೇವಸ್ಥಾನವು ಸುಮಾರು 800 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ ಮತ್ತು ಇದನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ.ಪುರಾಣಗಳ ಪ್ರಕಾರ, ವಸಿಷ್ಠ ಮಹರ್ಷಿಗಳು ಇಲ್ಲಿ ಭಗವಾನ್ ವೆಂಕಟರಮಣ ಸ್ವಾಮಿಯನ್ನು ಕುರಿತು ತಪಸ್ಸು ಮಾಡಿದ್ದರು ಮತ್ತು ಅವರ ತಪಸ್ಸಿಗೆ ಮೆಚ್ಚಿ ಭಗವಾನ್ ವೆಂಕಟರಮಣ ಸ್ವಾಮಿ ಪ್ರತ್ಯಕ್ಷರಾದರು ಎಂದು ನಂಬಲಾಗಿದೆ.
ಪ್ರತಿ ವರ್ಷ ಆಷಾಢ ಮಾಸದ ಶುದ್ಧ ದ್ವಾದಶಿಯಂದು ಇಲ್ಲಿ ಮಹಾ ರಥೋತ್ಸವವನ್ನು ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ

