ಬೆಂಗಳೂರಿನ ಈ ಪ್ರಾಚೀನ ವಿಷ್ಣು ದೇವಾಲಯದಲ್ಲಿ ಹುಣ್ಣಿಮೆಯಂದು ಹರಕೆ ಹೊತ್ತರೆ ಕಷ್ಟಗಳು ಮಂಜುಗಡ್ಡೆಯಂತೆ ಕರಗುತ್ತವೆ!


 

ವಿಷ್ಣು ದೇವರಿಗೆ ಸಮರ್ಪಿತವಾದ ಬೆಂಗಳೂರಿನ ಅತಿ ಅತಿ ಪ್ರಾಚೀನವಾದ ಈ ದೇವಸ್ಥಾನಕ್ಕೆ ಹೋಗಿ ಹುಣ್ಣಿಮೆಯಲ್ಲಿ ಹರಕೆ ಹೊತ್ತುಕೊಂಡರೆ ನಿಮ್ಮ ಕಷ್ಟಗಳು ಮಂಜುಗಡ್ಡೆಯಂತೆ ಕರಗಿ ಹೋಗುತ್ತದೆ ಎಂದು ಹೇಳುತ್ತಾರೆ ಹಾಗಾದರೆ ಆ ದೇವಸ್ಥಾನ ಯಾವುದು ಮತ್ತು ಎಲ್ಲಿ ಇದೆ ಅಂತ ಹೇಳ್ತೀನಿ ಬನ್ನಿ 


ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿರುವ ಮತ್ತು ಬೆಂಗಳೂರಿನಿಂದ ಸುಮಾರು 20-33 ಕಿ.ಮೀ. ದೂರದಲ್ಲಿರುವ ಹಾಗೂ 9ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಬೆಂಗಳೂರಿನ ದೇವಸ್ಥಾನ ಪುರಾತನ ಮತ್ತು ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಇದು ಭಗವಾನ್ ವಿಷ್ಣು ಮತ್ತು ಅವರ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಗೆ ಸಮರ್ಪಿತವಾಗಿದೆ.

ಇಲ್ಲಿ ದೊರೆತಿರುವ ಶಿಲಾಶಾಸನಗಳು ಮತ್ತು ವೀರಗಲ್ಲು ಶಿಲೆಗಳ ಪರಿಶೀಲನೆಯಿಂದ ಇದು ಚೋಳರ ಕಾಲದಲ್ಲಿ ನಿರ್ಮಿಸಿರಬಹುದು ಎಂದು ತಿಳಿದುಬಂದಿದೆ. ನಂತರ ವಿಜಯನಗರ ಸಾಮ್ರಾಜ್ಯದ ಅರಸರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.

ಬನ್ನೇರುಘಟ್ಟ ಅರಣ್ಯ ಪ್ರದೇಶವು ಹಿಂದೆ ಚಂಪಕ ಮರಗಳಿಂದ ಆವೃತವಾಗಿದ್ದು, ಋಷಿಮುನಿಗಳ ತಪೋಭೂಮಿಯಾಗಿತ್ತು. ಇದನ್ನು ಚಂಪಕಾರಣ್ಯ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಮುಖ್ಯ ದೇವರನ್ನು ಚಂಪಕಾರಾಯ ಎಂದು ಕರೆಯಲಾಗುತ್ತದೆ

ಇಲ್ಲಿ ಸ್ವರ್ಣಮುಖಿ ಕಲ್ಯಾಣಿ ಎಂಬ ನಿಗೂಢವಾದ ಪವಿತ್ರ ಕೊಳವಿದೆ. ಈ ಕೊಳದ ನೀರಿಗೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ನಂಬಲಾಗಿದೆ.ದೇವಾಲಯದ ಹಿಂದೆಯೇ ವೈಹಿನಿಗಿರಿ ಎಂಬ ಬೆಟ್ಟವಿದ್ದು, ಅಲ್ಲಿ 160 ಮೆಟ್ಟಿಲುಗಳ ಮೇಲೆ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಇದೆ. ಈ ಬೆಟ್ಟದ ಮೇಲಿಂದ ಬೆಂಗಳೂರಿನ ಸುಂದರ ನೋಟವನ್ನು, ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು

Top Post Ad

Below Post Ad