ನರಕಚತುರ್ದಶಿ ಮತ್ತು ದೀಪಾವಳಿ – ಒಳಗಿನ ಅಂಧಕಾರದಿಂದ ಆತ್ಮಜ್ಯೋತಿಯ ಕಡೆಗೆ | Inner Victory of Deepavali


 

ನಾವು ದೀಪ ಹಚ್ಚುತ್ತೇವೆ, ಆದರೆ ನಮ್ಮೊಳಗಿನ ಅಂಧಕಾರಕ್ಕೆ ಬೆಳಕು ಹಚ್ಚುತ್ತೇವೆಯೇ? ಈ ದೀಪಾವಳಿಯ ಸತ್ಯ ಅರ್ಥ ಕೇವಲ ಆಚರಣೆಯಲ್ಲಿ ಇಲ್ಲ ಅದು ಆತ್ಮಪರಿವರ್ತನೆ, ಜ್ಞಾನ, ಮತ್ತು ಆಂತರಿಕ ವಿಜಯದಲ್ಲಿ ಇದೆ.

ನರಕಚತುರ್ದಶಿಯ ತಾತ್ಪರ್ಯ:

ಶ್ರೀಕೃಷ್ಣನು ನರಕಾಸುರನನ್ನು ಜಯಿಸಿದಂತೆ, ನಾವೂ ನಮ್ಮೊಳಗಿನ ಅಹಂಕಾರ, ಕ್ರೋಧ, ಇರ್ಷೆ, ನಿರಾಶೆ, ನಕಾರಾತ್ಮಕತೆ ಇತ್ಯಾದಿ ನರಕಾಸುರರನ್ನು ಸೋಲಿಸಬೇಕು.

 ದೀಪ ಹಚ್ಚುವ ಅರ್ಥ:

ದೀಪ ಎಂದರೆ ಜ್ಞಾನ. ದೀಪ ಹಚ್ಚುವುದು ಎಂದರೆ ಆತ್ಮದ ಬೆಳಕನ್ನು ಪ್ರಜ್ವಲಿಸುವುದು. ಮನಸ್ಸನ್ನು ಶುದ್ಧಗೊಳಿಸುವುದು, ಪ್ರೀತಿ ಮತ್ತು ಶಾಂತಿಯನ್ನು ಹರಡುವುದು.

ಹಬ್ಬದಿಂದ ಕಲಿಯಬೇಕಾದ ಪಾಠ:

ದೀಪಾವಳಿ ಎಂದರೆ ಕೇವಲ ಹಬ್ಬವಲ್ಲ, ಅದು ಆತ್ಮಜಯದ ಯಾತ್ರೆ. ಈ ಬಾರಿಗೆ ಹಬ್ಬವನ್ನು ಆಚರಿಸೋಣ ಹೇಗೆಂದರೆ ಕೇವಲ ಆಚರಣೆಗೆ ಅಲ್ಲ, ಆತ್ಮಚಿಂತನಕ್ಕೆ ಮತ್ತು ಜ್ಞಾನಪ್ರಕಾಶಕ್ಕೆ.

ಈ ದೀಪಾವಳಿಯಲ್ಲಿ 

ನಮ್ಮೊಳಗಿನ ನರಕಾಸುರನನ್ನು ಸೋಲಿಸಿ,

ಆತ್ಮಜ್ಯೋತಿ, ಪ್ರೀತಿ, ಶಾಂತಿ ಮತ್ತು ಸಹನೆಯ ಬೆಳಕನ್ನು ಹಚ್ಚೋಣ. ಎಲ್ಲರಿಗೂ ನರಕಚತುರ್ದಶಿ ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು! ಪ್ರೀತಿ ಹಂಚಿ, ಬೆಳಕು ಹರಡಿ, ಒಳ್ಳೆಯ ಬದಲಾವಣೆಗೆ ದೀಪವಾಗಿರಿ.

Top Post Ad

Below Post Ad