ನಾವು ಈ ದಿನ ಮಾಹಿತಿ ಕೊಡುತ್ತಿರುವ ದೇವಸ್ಥಾನದ ಪವಿತ್ರ ನೀರಿನಲ್ಲಿ ಮುಳುಗಿದರೆ ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಚರ್ಮ ರೋಗಗಳು ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಹಾಗಾದ್ರೆ ಆ ದೇವಸ್ಥಾನ ಯಾವುದು? ಎಲ್ಲಿದೆ ಅಂತ ಹೇಳುತ್ತೇನೆ ಬನ್ನಿ
ನಾವು ಹೇಳುತ್ತಿರುವ ಆ ದೇವಸ್ಥಾನದ ಹೆಸರು ವೈತೀಶ್ವರನ್ಕೋಯಿಲ್ ದೇವಸ್ಥಾನ .
ಈ ವೈತೀಶ್ವರನ್ಕೋಯಿಲ್ ದೇವಸ್ಥಾನವು ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಇಲ್ಲಿ ಶಿವನನ್ನು ವೈದ್ಯನಾಥೇಶ್ವರ ಸ್ವಾಮಿ ಎಂದು ಪೂಜಿಸಲಾಗುತ್ತದೆ. "ವೈದ್ಯನಾಥೇಶ್ವರ" ಎಂದರೆ "ವೈದ್ಯರ ಅಧಿಪತಿ" ಎಂದರ್ಥ. ಹಾಗಾಗಿ, ಈ ದೇವಾಲಯವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ಪ್ರಬಲ ನಂಬಿಕೆ ಭಕ್ತರಲ್ಲಿದೆ.
ಈ ದೇವಾಲಯವು ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದು, ಚೋಳ ರಾಜವಂಶದ ಆಳ್ವಿಕೆಯಲ್ಲಿ ಇದನ್ನು ವಿಸ್ತರಿಸಲಾಯಿತು. ಇದು ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ
.

